About
ನಮಗೆ ಕನ್ನಡ (ಏಕೆ) ಬೇಕು
ಕರ್ನಾಟಕದಿಂದ ಬಹುದೂರ, ದೇಶ-ಭಾಷೆ-ವೇಷವನ್ನು ಬಿಟ್ಟು ಬಂದ ನಮಗೆ ಉತ್ತರ ಅಮೇರಿಕದಲ್ಲಿ ನಡೆಯುವ ಕನ್ನಡ ಕಲರವಗಳು ಬಹಳ ಅಪ್ಯಾಯಮಾನವಾಗಿರುತ್ತವೆ.
ನಮಗೆ ಕನ್ನಡ ಬೇಕು, ಅದು ನಮ್ಮ ದೈನಂದಿನ ಅಗತ್ಯಗಳಲ್ಲೊಂದು. ನಾವು ಕನ್ನಡದ ಮೂಲಕ ಮಾತನಾಡುವುದಷ್ಟೇ ಅಲ್ಲ, ಅದರ ಮೂಲಕ ಉಸಿರಾಡುತ್ತೇವೆ ಕೂಡ!