About
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿಯರಿಬ್ಬರು ಪಕ್ಕದ ಊರಿಗೆ ಸಂತೆಗೆಂದು ಹೋಗಿ ಮರಳಿ ಬರುತ್ತಿದ್ದರು. ಆಗ ಅಲ್ಲಿಯೇ ಹಾದಿಯಲ್ಲಿ ವಯಸ್ಸಾದ ವ್ಯಕ್ತಿಯೊಬ್ಬ ನಡೆಯಲು ಕಷ್ಟಪಡುತ್ತಿರುವುದನ್ನು ಕಂಡರು. ಆತನನ್ನು ಕಂಡು ದಂಪತಿಗಳ ಮನಸ್ಸು ಕರಗಿತು. ಆಗ ಹೆಂಡತಿ ಆ vayassada ವ್ಯಕ್ತಿಯ ಕೈ ಹಿಡಿದು ಆತನಿಗೆ ನಡೆಯಲು ಸಹಾಯ ಮಾಡಲು ಮುಂದಾದಳು. ಆದರೆ ಆತ ಆಕೆಯ ಕೈಯನ್ನು ಬಿಡದೆ ನೀನೇ ನನ್ನ ಹೆಂಡತಿ ಎಂದ....! ಮುಂದೇನಾಯಿತು ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com