
About
ಇದು ಡಾ|ಸಂಧ್ಯಾ ಪೈ ಅವರು ಮುದ್ದು ಮಕ್ಕಳಿಗಾಗಿ ಹೇಳಿದ ಸುಂದರ ಜಾನಪದ ಕಥೆಗಳಲ್ಲಿ ಒಂದು ಕಥೆ. ಒಂದಾನೊಂದು ಊರಿನಲ್ಲಿ ಗಂಡ ಹೆಂಡತಿ ಇದ್ದರು . ಬಡತನದಲ್ಲಿ ಬದುಕು ಸಾಗಿಸುತ್ತಿದ್ದ ಅವರು, ಇದ್ದಿದ್ದರಲ್ಲೇ ಬದುಕು ಸಾಗಿಸುತ್ತಿದ್ದರು . ಹೀಗಿರುವಾಗ ಒಮ್ಮೆ ಹೆಂಡತಿ ಗಂಡನ ಬಳಿ ಮನೆಗೆ ಬೇಕಾದ ದಿನಸಿ ಸಾಮಾನು ತರಲು ನಾಣ್ಯಗಳನ್ನು ನೀಡಿ ಕಳುಹಿಸಿದಳು . ಹೀಗೆ ನಾಣ್ಯ ಹಿಡಿದು ಹೊರಟ ಸಮಗಾರನಿಗೆ ಕುದುರೆ ಸವಾರನೊಬ್ಬ ಸಿಕ್ಕ . ಆತನ ಬಳಿ ಒಂದಷ್ಟು ಒಳ್ಳೆಯ ಮಾತುಗಳನ್ನು ಹೇಳು ಎಂದಾಗ ಒಂದು ಮಾತಿಗೆ ನಾಲ್ಕು ಅಣೆ ಆಗುತ್ತದೆ ಅಂದ . ಹೀಗೆ ನಾಲ್ಕು ಅಣೆ ಕೊಟ್ಟು ಪಡೆದ ಮಾತಿನಿಂದ ಸಮಗಾರನ ಬದುಕೇ ಬದಲಾಯಿತು . ಅದೇನದು ಮಾತು ? ಎಂಬ ಸುಂದರ ಕಥೆ ಕೇಳಿ ... ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
podcast.udayavani.com ಟೈಪ್ ಮಾಡಿ ಅಥವಾ QR ಕೋಡ್ ಸ್ಕ್ಯಾನ್ ಮಾಡಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ -
sandhyavanipodcast@gmail.com