Kannada Now and Then| ಕನ್ನಡ ಅಂದು  ಇಂದು- Rajyotsava Special
31 October 2025

Kannada Now and Then| ಕನ್ನಡ ಅಂದು ಇಂದು- Rajyotsava Special

100/100 Karnataka | ನೂರಕ್ಕೆ ನೂರು ಕರ್ನಾಟಕ || Radio Azim Premji University

About

What makes us Kannadiga — the icons we admire, the stories we tell, or the language we live?

In this Rajyotsava special, filmmaker T.N. Seetharam (Mayamruga, Mukta, Matadaana) reflects on five forces that shaped the spirit of Kannada — its icons, writers, films, songs, and language.

From Dr. Rajkumar to Basavanna, he traces how literature, poetry, and cinema built a shared Kannada consciousness.

Listen to this Rajyotsava conversation and rediscover what keeps Kannada alive.

ನಮ್ಮನ್ನು ಕನ್ನಡಿಗರನ್ನಾಗಿ ಮಾಡುವುದು ಯಾವುದು? ನಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳೇ, ನಾವು ಓದುವ ಕಥೆಗಳೇ ಅಥವಾ ನಾವು ಪ್ರತಿದಿನ ಆಡುವ ಭಾಷೆಯೇ?

ನೂರಕ್ಕೆ ನೂರು ಕರ್ನಾಟಕದ ಈ ರಾಜ್ಯೋತ್ಸವ ವಿಶೇಷ ಕಾರ್ಯಕ್ರಮದಲ್ಲಿ, ನಿರೂಪಕಿ ವರ್ಷಾ ರಾಮಚಂದ್ರ ಅವರೊಂದಿಗೆ ಮಾತನಾಡುತ್ತಾ ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ (ಮಾಯಾಮೃಗ, ಮುಕ್ತ, ಮತದಾನ), ತಮ್ಮ ಪ್ರಕಾರ ಕನ್ನಡದ ಚೈತನ್ಯವನ್ನು ರೂಪಿಸಿದ ಐದು ಶಕ್ತಿಗಳ ಬಗ್ಗೆ ಪ್ರತಿಬಿಂಬಿಸುತ್ತಾರೆ - ಹೆಮ್ಮೆಯನ್ನು ಪ್ರೇರೇಪಿಸಿದ ಮೇರು ವ್ಯಕ್ತಿಗಳು, ಕಲ್ಪನೆಯನ್ನು ಆಳಗೊಳಿಸಿದ ಬರಹಗಾರರು, ಸಾಹಿತ್ಯವನ್ನು ಜನಸಾಮಾನ್ಯರಿಗೆ ಕೊಂಡೊಯ್ದ ಚಲನಚಿತ್ರಗಳು, ಅದಕ್ಕೆ ಲಯ ನೀಡಿದ ಹಾಡುಗಳು ಮತ್ತು ನಮ್ಮನ್ನು ಒಟ್ಟಿಗೆ ಹಿಡಿದಿಟ್ಟುಕೊಳ್ಳುವ ಭಾಷೆ.

ಡಾ.ರಾಜಕುಮಾರ್ ಮತ್ತು ಗುಬ್ಬಿ ವೀರಣ್ಣ ಅವರನ್ನು ನೆನೆದು, ಕುವೆಂಪು ಅವರಿಂದ ತೇಜಸ್ವಿ, ಭೈರಪ್ಪ ಅವರವರೆಗಿನ ಲೇಖಕರನ್ನು ಕೊಂಡಾಡಿದ ಅವರು, ಸಂಸ್ಕಾರ, ಬೆಳ್ಳಿ ಮೋಡ, ಗೆಜ್ಜೆ ಪೂಜೆಯ ಮೂಲಕ ಸಾಹಿತ್ಯ ಚಿತ್ರರಂಗಕ್ಕೆ ಬೆಸೆದುಕೊಂಡಿದ್ದ 70ರ ದಶಕವನ್ನು ಮತ್ತೆ ಮೆಲುಕು ಹಾಕುತ್ತಾರೆ. ಬಸವಣ್ಣನವರ ವಚನಗಳಿಂದ ಹಿಡಿದು ಶಿಶುನಾಳ ಷರೀಫರ ಗೀತೆಗಳವರೆಗೆ, ಕವಿತೆ, ಸಿನಿಮಾ, ಸಂಸ್ಕೃತಿ ಸೇರಿ ಕನ್ನಡದ ಪ್ರಜ್ಞೆಯನ್ನು ಹೇಗೆ ಕಟ್ಟಿದವು ಎಂಬುದನ್ನು ಸೀತಾರಾಮ್ ಗುರುತಿಸುತ್ತಾರೆ.

ಕನ್ನಡವನ್ನು ಜೀವಂತವಾಗಿರಿಸುವದನ್ನು ಮರುಶೋಧಿಸಲು ಈಗಲೇ ವೀಕ್ಷಿಸಿ.